Index   ವಚನ - 796    Search  
 
ಮೂರವಸ್ಥೆಯ ನೆಲೆಯೆಂದು ಕಾಬವ ಅರಿವಿಲ್ಲದ ಅಜ್ಞಾನಿ ನೋಡಾ. ಹೇಳಿದವಸ್ಥಾತ್ರಯದೊಳಿದ್ದಡೆ ಜನನ ಮರಣ ತಪ್ಪದು ನೋಡಾ. ಸಾಕ್ಷಾವಸ್ಥೆಯ ತೂರ್ಯವ ತತ್ಪರವೆಂದಡೆ ಅಲ್ಲಲ್ಲ. ಮೂರವಸ್ಥೆಯ ಅರ್ಥತೂರ್ಯವ ತತ್ಪರವೆಂದಡೆ ಜನನ ಮರಣವಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.