ಕಾಯ ಜೀವದ ಹೊಲಿಗೆ ಬಿಚ್ಚಲರಿಯದಿದ್ದೆನು ಅನೇಕ ಕಾಲವು.
ಕಾಯ ಜೀವದ ಹೊಲಿಗೆಯ ಬಿಚ್ಚಿ ತೋರಿದನೆನ್ನ ಸದ್ಗುರುಸ್ವಾಮಿ.
ಜೀವಪರಮರ ಭೇದವನರಿಯದೆ ಅನೇಕ ಭವದಲ್ಲಿ ಬಂದೆನು.
ಅನೇಕ ಭವದಲ್ಲಿ ಬಂದ ಶಿಶುವನೆತ್ತಿಕೊಂಡು
ಜೀವ ಪರಮರ ಭೇದವ ತಿಳಿಹಿಸಿ
ಬೆರೆಸುವ ಪರಿಯ ತೋರಿದ ಮಹಾಗುರುವಿಂಗೆ
ನಮೋ ನಮೋ ಎನುತಿರ್ದೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Kāya jīvada holige biccalariyadiddenu anēka kālavu.
Kāya jīvada holigeya bicci tōridanenna sadgurusvāmi.
Jīvaparamara bhēdavanariyade anēka bhavadalli bandenu.
Anēka bhavadalli banda śiśuvanettikoṇḍu
jīva paramara bhēdava tiḷihisi
beresuva pariya tōrida mahāguruviṅge
namō namō enutirdenu nōḍā
apramāṇakūḍalasaṅgamadēvā.