Index   ವಚನ - 799    Search  
 
ಊನವಾಗಿಹ ದೇಹವ ಕೂಡಿಕೊಂಡು ಹೋಗಿ ತಾನದಾಗಿ, ಜೀವನು ತಾನೆಯಾಗಿ, ಸಾಯದೆ ಸತ್ತು ಮೋನವಾಗಿಹ ತೂರ್ಯಾತೀತವ ಮುಳುಗಿಕೊಂಡಿಹ ಜ್ಞಾನನಾಯಕನೆ ಈಶನೆಂದು ಶ್ರುತಿಗಳು ಸಾರುತ್ತಿವೆ ನೋಡಾ ಅಪ್ರಮಾಣಕೂಡಲಸಂಗಮದೇವಾ.