ಶ್ಲೋಕದೊಳಗಣ ಅರ್ಥದಂತಿದ್ದುದು,
ಫಲದೊಳಗಣ ರುಚಿಯಂತಿದ್ದುದು,
ಕ್ಷೀರದೊಳಗಣ ಘೃತದಂತಿದ್ದುದು ನೋಡಾ
ಮಹಾಘನದಲ್ಲಿ ಲೀಯವಾದ ಶರಣನ ನಿಲವು,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ślōkadoḷagaṇa arthadantiddudu,
phaladoḷagaṇa ruciyantiddudu,
kṣīradoḷagaṇa ghr̥tadantiddudu nōḍā
mahāghanadalli līyavāda śaraṇana nilavu,
apramāṇakūḍalasaṅgamadēvā.