Index   ವಚನ - 808    Search  
 
ಕರ್ಮಭಾವವು ಕೆಟ್ಟಡೊಂದು ನಿರ್ವಾಣವೆಂದು ಶ್ರುತಿಗಳು ಸಾರುತ್ತಿವೆ ನೋಡಾ. ಕಾರಣಭಾವ ಕೆಟ್ಟಡೊಂದು ನಿರ್ವಾಣವೆಂದು ಶ್ರುತಿಗಳು ಸಾರುತ್ತಿವೆ ನೋಡಾ. ನಿಂದ ವಾಸನೆಯು ಕೆಟ್ಟಡೊಂದು ನಿರ್ವಾಣವೆಂದು ಶ್ರುತಿಗಳು ಸಾರುತ್ತಿವೆ ನೋಡಾ. ಈ ಮೂರು ನಿರ್ವಾಮವನೊಳಕೊಂಡು ಇಹುದೊಂದು ಮಹಾನಿರ್ವಾಣವೆಂದು ಶ್ರುತಿಗಳು ಸಾರುತ್ತಿವೆ ನೋಡಾ. ಆ ಮಹಾ ನಿರ್ವಾಣವನೊಳಕೊಂಡು ಅಖಂಡಿತ ಅಪ್ರಮಾಣ ಅಗೋಚರವಾಗಿಹುದೊಂದು ನಿರ್ವಾಣ ನೋಡಾ. ಆ ನಿರ್ವಾಣವ ಶ್ರುತಿಗಳು ಅತ್ಯತಿಷ್ಠದ್ದಶಾಂಗುಲವೆಂದವು ನೋಡಾ ಅಪ್ರಮಾಣಕೂಡಲಸಂಗಮದೇವಾ.