ಬಿಂದುವಾಗಿದ್ದು ಅಲ್ಲದೆ
ನಾದವಾಗಿಹ ಘನವನಾರೂ ಅರಿಯರು.
ನಾದವಾಗಿದ್ದು ಅಲ್ಲದೆ
ಕಲೆಯಾಗಿಹ ಘನವನಾರೂ ಅರಿಯರು.
ನಾದಬಿಂದುಕಲೆಯಾಗಿ ಅಲ್ಲದೆ
ನಾದಬಿಂದುಕಲಾತೀತವಾಗಿಹ ಘನವನಾರೂ ಅರಿಯರು
ನಾದಬಿಂದುಕಲಾತೀತವಾಗಿಹ ಘನವ ಮೀರಿ
ಅತ್ತತ್ತವಾಗಿಹ ಮಹಾಘನವನಾರೂ ಅರಿಯರು
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Binduvāgiddu allade
nādavāgiha ghanavanārū ariyaru.
Nādavāgiddu allade
kaleyāgiha ghanavanārū ariyaru.
Nādabindukaleyāgi allade
nādabindukalātītavāgiha ghanavanārū ariyaru
nādabindukalātītavāgiha ghanava mīri
attattavāgiha mahāghanavanārū ariyaru
apramāṇakūḍalasaṅgamadēvā.