Index   ವಚನ - 812    Search  
 
ಗುರುಕರುಣವಿಲ್ಲದೆ ವೇದಾಗಮಶಾಸ್ತ್ರಪುರಾಣಂಗಳನೋದಿ ಕಾಣದೆ ಹೋದರು. ಅದು ಕಾರಣವೆ,- ವೇದವಿಪ್ರರ ಬೋಧೆ, ಶಾಸ್ತ್ರ ಸಂತೆಯ ಸುದ್ಧಿ, ಪುರಾಣ ಪುಂಡರಗೋಷ್ಠಿ ಎಂಬ ಶರಣರ ವಾಕ್ಯ ದಿಟ ನೋಡಾ ಅಪ್ರಮಾಣಕೂಡಲಸಂಗಮದೇವಾ.