Index   ವಚನ - 822    Search  
 
ಕುರುಹು ಕೆಟ್ಟು ಬೀಜದಲ್ಲಿ ಮೂರು ನಿರಾಳವೃಕ್ಷ ಹುಟ್ಟಿತ್ತು. ಒಂದು ವೃಕ್ಷ ಹನ್ನೆರಡು ಕೊಂಬಾದವು. ಒಂದು ವೃಕ್ಷ ಹದಿನಾರು ಕೊಂಬಾದವು. ಒಂದು ವೃಕ್ಷ ಎಂಟು ಕೊಂಬಾದವು. ಸದ್ವಾಸನೆಯೆಂಬ ಹೂವಾಯಿತ್ತು. ಸಚ್ಚಿದಾನಂದವೆಂಬ ಕಾಯಾಯಿತ್ತು. ನಿಶ್ಶಬ್ದವೆಂಬ ಹಣ್ಣಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.