Index   ವಚನ - 831    Search  
 
ಕಣ್ಣಿಲ್ಲದಂಧಕ ಕಾಲಿಲ್ಲದ ಪಶುವ ಮೇಸುವ ನೋಡಾ. ಕಣ್ಣಿಲ್ಲದಂಧಕ ತಗುಳುವ, ಕಾಲಿಲ್ಲದ ಪಶುವೋಡದು, ಗಗನದಲ್ಲಿ ತಲೆಯಿಲ್ಲದ ವ್ಯಾಘ್ರ ಹಿಡಿದು ನುಂಗಿತ್ತ ಕಂಡು ಬೆರಗಾದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.