Index   ವಚನ - 832    Search  
 
ಕೋಣನ ಬಸುರಲ್ಲಿ ಒಂದು ಕಪಿ ಹುಟ್ಟಿ ಕುಣಿವುದ ಕಂಡೆನು. ಕುಂಡಲಿಯ ಮಧ್ಯದಲ್ಲಿ ಒಂದು ಮುಂಡ ಹುಟ್ಟಿ, ಕುಣಿದ ಕಪಿಯ ಕಂಡು ಬೆರಗಾದೆ ನೋಡಾ ಅಪ್ರಮಾಣಕೂಡಲಸಂಗಮದೇವಾ.