Index   ವಚನ - 842    Search  
 
ಜಂಬುಕ ಹದಿನಾಲ್ಕು ವಿಷಯವನುಂಡು ಸತ್ತವು ನೋಡಾ, ಹಿರಿಯ ಕುದುರೆ ಹತ್ತು ಐಮುಖವಾಯಿತ್ತು ನೋಡಾ, ತೂರ್ಯ ತೂರ್ಯಾತೀತದಲ್ಲಿ ಲೀಯವಾಯಿತ್ತು. ಆ ತೂರ್ಯಾತೀತ ಮಹಾಘನಗಂಭೀರದಲ್ಲಿ ಲಯವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.