ಏಳುಸುತ್ತಿನ ಕೋಟೆಗೆ ಒಂಬತ್ತು ಬಾಗಿಲು,
ಇಪ್ಪತ್ತೈದು ಗ್ರಾಮ ನೋಡಾ.
ಇಪ್ಪತ್ತೈದು ಗ್ರಾಮದೊಳಗೆ ಎಂಟಾನೆ, ಹತ್ತು ಕುದುರೆ,
ಅರುವತ್ತಾರುಕೋಟಿ ಕಾಲಾಳು,
ಐವರು ತಳವಾರರು, ನಾಲ್ವರು ಪ್ರಧಾನಿಗಳು,
ಏಳುಮಂದಿ ಅರಸರು, ಒಬ್ಬ ರಾಯನು,
ಇಷ್ಟನು ಕೂಡಿಕೊಂಡು ಹನ್ನೆರಡುಗಾವುದ ದಾಳಿಯೋಗಿ,
ಎಂಟುಗಾವುದ ತಿರುಗಲೊಡನೆ
ಆ ಇಪ್ಪತ್ತೈದು ಗ್ರಾಮವನು, ಎಂಟಾನೆಯನು,
ಹತ್ತು ಕುದುರೆಯನು, ಅರುವತ್ತಾರುಕೋಟಿ ಕಾಲಾಳನು,
ಐವರು ತಳವಾರರನು, ನಾಲ್ವರು ಪ್ರಧಾನಿಗಳನು,
ಏಳುಮಂದಿ ಅರಸುಗಳನು, ಒಬ್ಬ ರಾಯನನು
ಒಬ್ಬ ಸೂಳೆ ನುಂಗಿದಳು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ēḷusuttina kōṭege ombattu bāgilu,
ippattaidu grāma nōḍā.
Ippattaidu grāmadoḷage eṇṭāne, hattu kudure,
aruvattārukōṭi kālāḷu,
aivaru taḷavāraru, nālvaru pradhānigaḷu,
ēḷumandi arasaru, obba rāyanu,
iṣṭanu kūḍikoṇḍu hanneraḍugāvuda dāḷiyōgi,
eṇṭugāvuda tirugaloḍane
ā ippattaidu grāmavanu, eṇṭāneyanu,
hattu kudureyanu, aruvattārukōṭi kālāḷanu,
aivaru taḷavāraranu, nālvaru pradhānigaḷanu,
ēḷumandi arasugaḷanu, obba rāyananu
obba sūḷe nuṅgidaḷu nōḍā
apramāṇakūḍalasaṅgamadēvā