Index   ವಚನ - 843    Search  
 
ಪದ್ಮವೊಂದು ಮೊಗ್ಗೆ ಮೂರುಂಟು ನೋಡಾ: ಮೂರು ವಿಕಸಿತವಾಗಿ, ಸ್ವಯಂಪ್ರಕಾಶದ ಬೆಳಗಿನೊಳಗೆ ಓಲಾಡುತ್ತಿದ್ದೆನು. ಆ ಸ್ವಯಂಪ್ರಕಾಶದ ಬೆಳಗಿನ ಬೆಳಗನೊಳಕೊಂಡು ಆ ಸ್ವಯಂಪ್ರಕಾಶದ ಬೆಳಗು ತಾನಾದ ಶರಣನಪೂರ್ವವೆಂದು ಅವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದವು ನೋಡಾ ಶ್ರುತಿಗಳು ಅಪ್ರಮಾಣಕೂಡಲಸಂಗಮದೇವಾ.