Index   ವಚನ - 849    Search  
 
ಉರಿಯ ಬೀಜದ ಬಾಯಲ್ಲಿ ಎರಡು ಪಕ್ಷಿ ಹುಟ್ಟಿತ್ತು ನೋಡಾ, ಒಂದು ಪಕ್ಷಿಯೆ ಆದಿ, ಒಂದು ಪಕ್ಷಿಯೆ ಅನಾದಿ ನೋಡಾ, ಒಂದು ಪಕ್ಷಿಯೆ ಸಕಲ, ಒಂದು ಪಕ್ಷಿಯೆ ನಿಃಕಲ, ಎರಡು ಪಕ್ಷಿಯು ಕೂಡಿ ಸಕಲನಿಃಕಲವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.