Index   ವಚನ - 850    Search  
 
ಪರಬ್ರಹ್ಮಸ್ವರೂಪವಾಗಿಹ ಪ್ರಣವದ ಬಾವಿಯೊಳಗೆ ಪರಮಾನಂದವೆಂಬ ಜಲವಿಹುದು. ನಿರಾಳವೆಂಬ ನೇಣಿನಲ್ಲಿ ನಿರಂಜನವೆಂಬ ಮಡಕೆಯ ಕಟ್ಟಿ, ಪರಮಾನಂದವೆಂಬ ಜಲ ಸೇದಬಲ್ಲಾತನೆ ಶಿವಯೋಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.