Index   ವಚನ - 852    Search  
 
ಸಮತೆ ಸಮಾಧಾನವೆಂಬ ಭೂಮಿಯ ಮೇಲೆ ನಿರಂಜನವೆಂಬ ಅಶ್ವಂಗೆ ನಿರಾಳವೆಂಬ ಹಲ್ಲಣವ ಬಿಗಿದು, ಜ್ಞಾನವೆಂಬ ವಾಘೆಯನಿಕ್ಕಿ, ನಿರಾಮಯವೆಂಬ ರಾವುತನೇರಿ, ಮುನ್ನೂರರುವತ್ತುಗಾವುದ ದಾಳಿಹೋಗಿ ತಿರುಗಿದ ನೋಡಾ. ಈ ಅನುಭಾವವ ತಿಳಿದು ಅನುಭವಿಸಬಲ್ಲಾತನು ಪರಮಯೋಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.