Index   ವಚನ - 851    Search  
 
ಅನಂತಕೋಟಿ ಸೂರ್ಯ ಚಂದ್ರಾಗ್ನಿಪ್ರಕಾಶವಾಗಿಹ ಪರಂಜ್ಯೋತಿಯಲ್ಲಿ ನಿರಾಮಯಬೀಜ ಹುಟ್ಟಿತ್ತು ನೋಡಾ. ನಿರಾಮಯಬೀಜದಲ್ಲಿ ನಿರಾಳ ನಿರಂಜನವೆಂಬ ವೃಕ್ಷ ತಲೆದೋರಿ, ಉದಯಾಸ್ತಮಾನವೆಂಬೆರಡರಿದ ಶರಣಂಗೆ, ಅನಂತಕೋಟಿ ಶಾಖಾದಿಗಳಾದವು ನೋಡಾ. ಪರಮಾನಂದವೆಂಬ ಹೂವಾಯಿತ್ತು. ಪರಮಪರಿಣಾಮವೆಂಬ ಕಾಯಾಯಿತ್ತು, ಪರಮಪರಿಣಾಮದ ತೃಪ್ತಿಯೆಂಬ ಹಣ್ಣಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.