Index   ವಚನ - 857    Search  
 
ಬೀಜವ ವೃಕ್ಷ ನುಂಗಿ ತೋರಿದ ಘನವನೇನೆಂಬೆ ನೋಡಾ! ವೃಕ್ಷ ಬೀಜವ ನುಂಗಿ ತೊರಿದ ಘನವನೇನೆಂಬೆ ನೋಡಾ! ಈ ಎರಡರ ಭೇದವನು ಉಪಮಿಸಬಾರದು. ಬೀಜವೃಕ್ಷನ್ಯಾಯ ಲಿಂಗಾಂಗಭೇದ; ಬಿಚ್ಚಿ ಬೇರಿಲ್ಲ ಬೆರಸಿ ಒಂದಲ್ಲ, ಅಪ್ರಮಾಣಕೂಡಲಸಂಗಮದೇವಾ.