Index   ವಚನ - 859    Search  
 
ಸರ್ಪನ ಬಾಯಲ್ಲಿ ಚಂದ್ರಸೂರ್ಯರುತ್ಪತ್ಯವಾಗಿ ಮಹಾಮೇರುವ ತಿರುಗುವರು. ಆ ಸರ್ಪಂಗೆಯೂ ಚಂದ್ರಸೂರ್ಯರಿಗೂ ಅನೇಕ ಕಾಲ ಹಗೆಗಳಾಗಿಹವು. ಆ ಸರ್ಪನು ಚಂದ್ರಸೂರ್ಯರ ಸಂಧಿಸಿ ಹಿಡಿಯಿತ್ತು ನೋಡಾ. ಈ ಭೇದವನರಿದ ಶರಣನು ಉದಯಾಸ್ತಮಾನವೆಂದರಿದ ಶಿವಯೋಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.