Index   ವಚನ - 860    Search  
 
ಹುಸಿವರ್ಣನಾಗಿ ಪಂಚಭೂತವಲ್ಲ, ಉದಯಾಸ್ತಮಾನವಾಗಿಹ ಚಂದ್ರಸೂರ್ಯರಲ್ಲ, ಆರುವರ್ಣಂಗಳಲ್ಲ, ಅರೂಪಲ್ಲ, ನಿರೂಪಲ್ಲ, ನಿರಾಳ ನಿರಂಜನ ನಿರಾಮಯ ನಿರಾಮಯಾತೀತವ ರೂಪೆಂದು ಕಾಬುವ ಭವಭಾರಿಗಳ ಎಂಬತ್ತು ನಾಲ್ಕು ಲಕ್ಷಯೋನಿಯಲ್ಲಿ ತಿರುಗಿ ತಿರುಗಿ ಹುಟ್ಟಿಸದೆ ಮಾಣ್ಬನೆ ನಮ್ಮ ಅಪ್ರಮಾಣಕೂಡಲಸಂಗಮದೇವ?