Index   ವಚನ - 861    Search  
 
ಸರ್ಪನ ಹೆಸರ ಹೇಳಿದಡೆ ವಿಷ ಹತ್ತಿತ್ತು ನೋಡಾ, ಅತ್ತತ್ತ ಏನ ಮಾಡುವೆ ಯಂತ್ರ ಮಂತ್ರವಾದಿಗಳಿಗಳವಲ್ಲ ನೋಡಾ. ಒಂದಿರುಹೆ ಅರುವತ್ತಾರುಕೋಟಿ ಕೋಣನ ನುಂಗಿತ್ತು ನೋಡಾ, ಸೊಳ್ಳೆಯ ಕಾಲಬೆರಳಲ್ಲಿ ಎಂಟಾನೆ ನಿಂತು ಆಡುತ್ತಿವೆ ನೋಡಾ ಅಪ್ರಮಾಣಕೂಡಲಸಂಗಮದೇವಾ.