Index   ವಚನ - 866    Search  
 
ಶರಣ ಸತ್ತು, ಸುತ್ತಿದ್ದ ಪ್ರಪಂಚ ಕೆಟ್ಟವು ನೋಡಾ. ನಿರಾಳ ನಿರಂಜನ ನಿರಾಮಯ ನಿರಾಮಯಾತೀತವೆಂಬ ಮಹಾಗಣೇಶ್ವರರು ಹೊತ್ತುಕೊಂಡು ಹೋದರು ನೋಡಾ. ಹೊತ್ತುಕೊಂಡು ಹೋಗಿ, ಅತ್ಯತಿಷ್ಠದ್ದಶಾಂಗುಲವೆಂಬ ನಿಜಸಮಾಧಿಯ ತೆಗೆದು ನಿಕ್ಷೇಪಿಸಿದರು ನೋಡಾ ಅಪ್ರಮಾಣಕೂಡಲಸಂಗಮದೇವಾ.