Index   ವಚನ - 881    Search  
 
ಅಯ್ಯಾ, ಆತ್ಮಯೋಗಿಗಳು ದೇಹವಾಸನೆ ಕೆಡದೆ ಮೋನಮುದ್ರೆಯಲ್ಲಿದ್ದಡೇನು? ಅಯ್ಯಾ, ಆತ್ಮಯೋಗಿಗಳು ಜೀವಹಮ್ಮು ಕೆಡದೆ ಮೋನಮುದ್ರೆಯಲ್ಲಿದ್ದಡೇನು? ಅಯ್ಯಾ, ಆತ್ಮಯೋಗಿಗಳು ಮನದ ಸಂಚಲವರಿಯದೆ ಮೋನಮುದ್ರೆಯಲ್ಲಿದ್ದಡೇನು? ಅಯ್ಯಾ, ಆತ್ಮಯೋಗಿಗಳು ಭಾವಭ್ರಮೆಯರಿಯದೆ ಮೋನಮುದ್ರೆಯಲ್ಲಿದ್ದಡೇನು? ಭವಭವಾಂತರದಲ್ಲಿ ಬಹುದು ತಪ್ಪದು ನೋಡಾ ಅಪ್ರಮಾಣಕೂಡಲಸಂಗಮದೇವಾ.