ನಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಆಚಾರಲಿಂಗಸಂಬಂಧಿಯೆಂಬೆ?
ಮಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಗುರುಲಿಂಗಸಂಬಂಧಿಯೆಂಬೆ?
ಶಿಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಶಿವಲಿಂಗಸಂಬಂಧಿಯೆಂಬೆ?
ವಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಜಂಗಮಲಿಂಗಸಂಬಂಧಿಯೆಂಬೆ?
ಯಕಾರದೊಳಗೆ ಐವತ್ತೊಂದಕ್ಷರವನರಿಯದೆ
ಎಂತು ಪ್ರಸಾದಲಿಂಗಸಂಬಂಧಿಯೆಂಬೆ?
ಓಂಕಾರದೊಳಗೆ ಐವತ್ತೊಂದಕ್ಷರವನರಿಯದೆ?
ಎಂತು ಮಹಾಲಿಂಗಸಂಬಂಧಿಯೆಂಬೆ?
ಓಂಕಾರದೊಳಗೆ ಸಮಸ್ತ ಭೇದಾದಿಭೇದಂಗಳ ತಿಳಿದು ಮೀರಿ
ನಿರ್ವಯಲನರಿಯದೆ,
ಎಂತು ನಿರ್ವಯಲಸಂಬಂಧಿಯೆಂಬೆನಯ್ಯಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nakāradoḷage aivattondakṣaravanariyade
entu ācāraliṅgasambandhiyembe?
Makāradoḷage aivattondakṣaravanariyade
entu guruliṅgasambandhiyembe?
Śikāradoḷage aivattondakṣaravanariyade
entu śivaliṅgasambandhiyembe?
Vakāradoḷage aivattondakṣaravanariyade
entu jaṅgamaliṅgasambandhiyembe?
Yakāradoḷage aivattondakṣaravanariyade
entu prasādaliṅgasambandhiyembe?
Ōṅkāradoḷage aivattondakṣaravanariyade?
Entu mahāliṅgasambandhiyembe?
Ōṅkāradoḷage samasta bhēdādibhēdaṅgaḷa tiḷidu mīri
nirvayalanariyade,
entu nirvayalasambandhiyembenayyā
apramāṇakūḍalasaṅgamadēvā.