Index   ವಚನ - 891    Search  
 
ಓಂಕಾರವೆಂಬ ಬಾವಿಯೊಳಗೆ ಒಂದು ಮರ ಹುಟ್ಟಿತ್ತು ನೋಡಾ. ಆ ಮರಕ್ಕೆ ಮೂರೇಳು ಸಾವಿರದಾರುನೂರು ಕೊಂಬೆಗಳಾದವು ನೋಡಾ. ಏಳುಸಾವಿರದಿನ್ನೂರು ಕೊಂಬೆ ಮುರಿದು ಬಿದ್ದವು ನೋಡಾ. ಪೃಥ್ವಿ ಜಲದಲ್ಲಿ ಮುದ್ದೆಯಾಯಿತ್ತು; ಆ ಹಣ್ಣ ಸವಿಯಬಲ್ಲಾತನು ಮಹಾಶರಣ ನೋಡಾ ಅಪ್ರಮಾಣಕೂಡಲಸಂಗಮದೇವಾ.