Index   ವಚನ - 898    Search  
 
ಏನು ಏನೂ ಎನಲಿಲ್ಲದಂದು ಮಹಾಘನ ನಿರಂಜನಾತೀತವಾಗಿಹ ವಸ್ತು ಲೋಕಾದಿಲೋಕಂಗಳ ಸೃಜಿಸಬೇಕೆಂದು ನೆನಹುಮಾತ್ರದಲ್ಲಿಯೇ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಇನ್ನು ನಿರಂಜನಪ್ರಣವಸ್ಥಲದ ವಚನ ಅದೆಂತೆಂದಡೆ: ಮಂತ್ರಾಧ್ವ ಪದಾಧ್ವ ಜನನಕ್ಕೆ ಬಾರದಂದು, ವರ್ಣಾಧ್ವ ಭುವನಾಧ್ವ ಜನನಕ್ಕೆ ಬಾರದಂದು, ತತ್ತ್ವಾಧ್ವ ಕಲಾಧ್ವ ಜನನಕ್ಕೆ ಬಾರದಂದು, ನಿರಂಜನಪ್ರಣವನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮ ದೇವನು.