Index   ವಚನ - 899    Search  
 
ನಿರಾಳಜಾಗ್ರ ನಿರಾಳಸ್ವಪ್ನವಿಲ್ಲದತ್ತತ್ತ, ನಿರಾಳಸುಷುಪ್ತಿ ನಿರಳತೂರ್ಯವಿಲ್ಲದತ್ತತ್ತ, ನಿರಾಳವ್ಯೋಮ ನಿರಾಳವ್ಯೋಮಾತೀತವಿಲ್ಲದತ್ತತ್ತ, ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.