Index   ವಚನ - 909    Search  
 
ಇನ್ನು ಷಡ್ವಿಧಲಿಂಗ ಅದೆಂತೆಂದಡೆ: ಪೃಥ್ವಿಯಲ್ಲಿ ಆಚಾರಲಿಂಗವಿಹುದು, ಅಪ್ಪುವಿನಲ್ಲಿ ಗುರುಲಿಂಗವಿಹುದು; ತೇಜದಲ್ಲಿ ಶಿವಲಿಂಗವಿಹುದು, ವಾಯುವಿನಲ್ಲಿ ಜಂಗಮಲಿಂಗವಿಹುದು, ಆಕಾಶದಲ್ಲಿ ಪ್ರಸಾದಲಿಂಗವಿಹುದು, ಆತ್ಮನಲ್ಲಿ ಮಹಾಲಿಂಗವಿಹುದು ನೋಡಾ, ಶಿವಲಿಂಗ ಸೂತ್ರೇ ಸಾಕ್ಷಿ- ಆಚಾರಂ ಪಥ್ವೀಭೂತೇ ಚ ಆಪಶ್ಚ ಗುರುಲಿಂಗಯೋಃ | ತೇಜಂ ಚ ಶಿವಲಿಂಗಂ ವಾಯೌಚ ಚರಲಿಂಗಕಂ || ಪ್ರಸಾದಲಿಂಗೇತ್ವಾಕಾಶಂ ಆತ್ಮಾ ಚ ಮಹಾಮೇವ ಚ | ಇತಿ ಲಿಂಗಸ್ಥಲಂ ಜ್ಞಾತ್ವಾ ದುರ್ಲಭಂ ಚ ವರಾನನೇ ||'' ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.