ದಾಸಿಯ ಸಂಗವುಳ್ಳನ್ನಬರ ಗುರುವಿಲ್ಲವೆಂಬ
ಶ್ರುತಿ ದಿಟ ನೋಡಾ.
ವೇಶಿಯ ಸಂಗವುಳ್ಳನ್ನಬರ ಲಿಂಗವಿಲ್ಲವೆಂಬ
ಶ್ರುತಿ ದಿಟ ನೋಡಾ.
ಪರಸ್ತ್ರೀಯ ಸಂಗವುಳ್ಳನ್ನಬರ ಜಂಗಮವಿಲ್ಲವೆಂಬ
ಶ್ರುತಿ ದಿಟ ನೋಡಾ.
ಈ ತ್ರಿವಿಧಸಂಗವುಳ್ಳನ್ನಬರ ತ್ರಿವಿಧಪ್ರಸಾದವಿಲ್ಲವೆಂಬ
ಶ್ರುತಿ ದಿಟ ನೋಡಾ.
ತ್ರಿವಿಧಪ್ರಸಾದವಿಲ್ಲದಾತನೆ ಅನಾಚಾರಿಯೆಂಬ
ಶ್ರುತಿ ದಿಟ ನೋಡಾ.
ಆ ಅನಾಚಾರಿಯೆ ಪಂಚಮಹಾಪಾತಕನೆಂಬ
ಶ್ರುತಿ ದಿಟ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Dāsiya saṅgavuḷḷannabara guruvillavemba
śruti diṭa nōḍā.
Vēśiya saṅgavuḷḷannabara liṅgavillavemba
śruti diṭa nōḍā.
Parastrīya saṅgavuḷḷannabara jaṅgamavillavemba
śruti diṭa nōḍā.
Ī trividhasaṅgavuḷḷannabara trividhaprasādavillavemba
śruti diṭa nōḍā.
Trividhaprasādavilladātane anācāriyemba
śruti diṭa nōḍā.
Ā anācāriye pan̄camahāpātakanemba
śruti diṭa nōḍā
apramāṇakūḍalasaṅgamadēvā.