Index   ವಚನ - 917    Search  
 
ಪಸರ ಪಸರ ತಪ್ಪದಿಹ ಗಾಜುಗಳೆಲ್ಲ ರತ್ನವಾಗಬಹುದೆ ಅಯ್ಯಾ? ಕೇರಿ ಕೇರಿ ತಪ್ಪದಿಹ ಶ್ವಾನವೆಲ್ಲ ಸಿಂಹವಾಗಬಹುದೆ ಅಯ್ಯಾ? ಧರೆಯೊಳಗೆ ಬಿದ್ದು ಹೊರಳುವ ನಾಮಧಾರಕಗುರುಗಳೆಲ್ಲ ಸದ್ಗುರುವಾಗಬಲ್ಲರೆ ಅಯ್ಯಾ? ಇದು ಕಾರಣ ಮನವು ಮಹದಲ್ಲಿ ನಿಂದು ಪರಿಣಾಮ ನೆಲೆಗೊಂಡ ಮಹಾನುಭಾವ ಸದ್ಗುರು ಕೋಟಿಗೊಬ್ಬರು ಇಲ್ಲವೆಂಬೆನು ನೋಡಾ, ಅಪ್ರಮಾಣಕೂಡಲಸಂಗಮದೇವಾ.