ಕಾಯದಲ್ಲಿ ಕಾಯ ಸವೆದು,
ಪ್ರಾಣದಲ್ಲಿ ಪ್ರಾಣ ಸವೆದು,
ನಿಶ್ಚಿಂತವಾದ ಬಳಿಕ
ಹಸಿವು-ತೃಷೆಗಳೆಂಬವು ಅಳಿದು
ಹೋದವು ನೋಡಾ.
ಉಂಡಿಹೆನೆಂಬ ಬಯಕೆಯಿಲ್ಲ
ಒಲ್ಲೆನೆಂಬ ವೈರಾಗ್ಯವಿಲ್ಲ.
ಇದು ಸ್ವಾನುಭಾವತೃಪ್ತಿಯೊಳಡಗಿತ್ತು.
ಇದು ಕಾರಣ-ನಮ್ಮ ಗುಹೇಶ್ವರಲಿಂಗಕ್ಕೆ
ಆರೋಗಣೆ ಇಲ್ಲ ಕಾಣಾ, ಸಂಗನಬಸವಣ್ಣಾ.
Transliteration Kāyadalli kāya savedu,
prāṇadalli prāṇa savedu,
niścintavāda baḷika
hasivu-tr̥ṣegaḷembavu aḷidu
hōdavu nōḍā.
Uṇḍ'̔ihenemba bayakeyilla
ollenemba vairāgyavilla.
Idu svānubhāvatr̥ptiyoḷaḍagittu.
Idu kāraṇa-nam'ma guhēśvaraliṅgakke
ārōgaṇe illa kāṇā, saṅganabasavaṇṇā.
Hindi Translation शरीर में शरीर घिसे,
प्राण में प्राण घिसे - निश्चिंत होने के बाद,
भूख, प्यास मिठ गये देखा ।
खाने की चाह नहीं, न चाहने का वैराग्य नहीं,
यह स्वानुभाव तृप्ति में छिपा था।
इस कारण - हमारे गुहेश्वर लिंग को
भोजन नहीं देखा संगनबसवण्णा।
Translated by: Eswara Sharma M and Govindarao B N