ಕಾಯವಿಡಿದು ಸುಳಿದಾಡುವನ್ನಕ್ಕ,
ಕರಣಂಗಳ ಮೀರುವರಾರೈ ಚೆನ್ನಬಸವಣ್ಣಾ?
ಕರಣಂಗಳಿಂದ ಕರ್ಮಂಗಳ ಮಾಡುತ್ತಿದ್ದಿತು.
ಕರ್ಮವ ಕರ್ಮದಿಂದ ಅಳಿದು ಮಲವ ಜಲ ತೊಳೆದಂತೆ,
ನಾನು ಕಾಯದ ಕರ್ಮ ಮಾಡುವಲ್ಲಿ,
ಜೀವವಿಕಾರ ಬಿಡಿಸಿದೆಯಲ್ಲಾ! ಚೆನ್ನಬಸವಣ್ಣಾ!
ಗುಹೇಶ್ವರಲಿಂಗಕ್ಕೆ ಒಡಲಿಲ್ಲ ಎಂಬುದನು,
ಅರುಹಿದೆಯಲ್ಲಾ ಚೆನ್ನಬಸವಣ್ಣಾ.
Transliteration Kāyaviḍidu suḷidāḍuvannakka,
karaṇaṅgaḷa mīruvarārai cennabasavaṇṇā?
Karaṇaṅgaḷinda karmaṅgaḷa māḍuttidditu.
Karmava karmadinda aḷidu malava jala toḷedante,
nānu kāyada karma māḍuvalli,
jīvavikāra biḍisideyallā! Cennabasavaṇṇā!
Guhēśvaraliṅgakke oḍalilla embudanu,
aruhideyallā cennabasavaṇṇā.
Hindi Translation शरीर अपना कर घूमते रहने तक
साधनाओं को पाट करनेवाला कौन है? चेन्नबसवण्णा ?
साधनों से कर्मों को कर रहा था।
कर्म को कर्म से मिठे मैल को जल धोने जैसे-
मैंने शरीर के कर्म करने में
जीव विकार छुड़ा दिया न !
गुहेश्वर लिंगको पेठ नहीं कहना,
समझा दिया न चेन्नबसवण्णा ने।
Translated by: Eswara Sharma M and Govindarao B N