ಅಯ್ಯಾ, ನಿಜವೀರಶೈವೋದ್ಧಾರಕ
ವಿಶೇಷ ಭಕ್ತ ಮಹೇಶ್ವರರು
ಮಹಾಲಿಂಗೋದಯವಾದಿಯಾಗಿ
ನಿರವಯಲಿಂಗವಂತ್ಯವಾದ ಪರಿಯಂತರವು
ಸತ್ತುಚಿತ್ತಾನಂದರೂಪ ಧರಿಸಿ,
ನಿತ್ಯ ಗುರುಲಿಂಗಜಂಗಮ ಕಲ್ಯಾಣೋತ್ಸಹರಾಗಿ,
ಮಾರ್ಗಾಚಾರಂಗಳಲ್ಲಿ ಸತ್ಕ್ರಿಯಾವಧಾನ,
ಮೀರಿದಾಚಾರಂಗಳಲ್ಲಿ ಸಮ್ಯಜ್ಞಾನಾವಧಾನ,
ಸಂಪೂರ್ಣಾನಂದಭರಿತಾಚಾರಂಗಳಲ್ಲಿ
ಸ್ವಾನುಭಾವದ ಸದ್ಧರ್ಮ,
ನಡೆ-ನುಡಿಯೊಳಕೊಂಡು ಬೆಳಗುವ ಪರತತ್ವ
ಶಿವಯೋಗಾನುಸಂಧಾನದ ನಿಜಾವಧಾನದಲ್ಲಿ ಸಂತೃಪ್ತರಾಗಿ,
ಬೆಳಗಿಂಗೆ ಮಹಾಬೆಳಗಾಗಿ, ತನ್ನ ತಾನೇ ಮುಕ್ತಿಸ್ವರೂಪ
ನಿರವಯಪ್ರಭು ಮಹಾಂತ ತಾನೇ ನೋಡಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Ayyā, nijavīraśaivōd'dhāraka
viśēṣa bhakta mahēśvararu
mahāliṅgōdayavādiyāgi
niravayaliṅgavantyavāda pariyantaravu
sattucittānandarūpa dharisi,
nitya guruliṅgajaṅgama kalyāṇōtsaharāgi,
mārgācāraṅgaḷalli satkriyāvadhāna,
mīridācāraṅgaḷalli samyajñānāvadhāna,
sampūrṇānandabharitācāraṅgaḷalli
svānubhāvada sad'dharma,
naḍe-nuḍiyoḷakoṇḍu beḷaguva paratatva
śivayōgānusandhānada nijāvadhānadalli santr̥ptarāgi,
beḷagiṅge mahābeḷagāgi, tanna tānē muktisvarūpa
niravayaprabhu mahānta tānē nōḍā
sid'dhamallikārjunaliṅgēśvara.