Index   ವಚನ - 5    Search  
 
ಇಂತೆಸೆವ ಸ್ಥೂಲಾಚಮನಕ್ರಿಯೆಗಳಾದಲ್ಲಿ ಆ ತಂಬಿಗೆಯ ಪಾವುಡದಿಂದ ಒರೆಸಿ, ಶುಚಿಯಾದ ವಸ್ತ್ರವ ಎರಡು ಪದರಿನಿಂದ ಶೋಧಿಸಿ, ಲಿಂಗಬಾಹ್ಯರಿಗೆ ಗೋಪ್ಯವೆನಿಸಿ, ಭಕ್ತ ಜಂಗಮ ಕೂಡಿದಲ್ಲಿ, ತಾನು ಪಾದವ ಪ್ರಕ್ಷಾಲಿಸಿ, ತನ್ನ ಮನದಲ್ಲಿ ಮೂಲಪಂಚಾಕ್ಷರದ ನೆನಹಿನಿಂದ, ತನ್ನ ಹಸ್ತದ ಪಂಚಾಂಗುಲ, ಪಾದದ ಪಂಚಾಂಗುಲಗಳು ಸಹ ಸಮರಸವಾಗಿ, ಅಡಿಪಾದ ಮೂರುವೇಳೆ, ಪಂಚಾಂಗುಲ ಒಂದುವೇಳೆ, ಉಭಯಪಾದಗಳು ಎಂಟುವೇಳೆ ಸ್ಪರ್ಶನವ ಮಾಡಿ, ಮಂತ್ರಧ್ಯಾನ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ ನಮಸ್ಕರಿಸಿದ ಮೇಲೆ, ತಮ್ಮಿಬ್ಬರ ಮಧ್ಯದಲ್ಲುದಯವಾದ ಪರಮಾನಂದ ಗುರುಪಾದೋದಕವ ತಾವು ಕುಕ್ಕುಟಾಸನದಲ್ಲಿ ತೊಡೆಯಮೇಲೆ ಪಾವುಡವ ಹಾಕಿ, ಸೆಜ್ಜೆಯ ಬಿಚ್ಚಿ, ಲಿಂಗದೇವನ ಮೂಲಮಂತ್ರದೃಷ್ಟಿಯಿಂದ ನಿರೀಕ್ಷಿಸುವುದೆ ನಿರವಯಪ್ರಭು ಮಹಾಂತನ ನಡೆ ನುಡಿ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.