Index   ವಚನ - 13    Search  
 
ಪರಮಪವಿತ್ರಪರಿಣಾಮೋದಕವನ್ನು ಕ್ರಿಯಾಜ್ಞಾನಯುಕ್ತವಾದ ಜಂಗಮಮೂರ್ತಿಯು ಎರಡುಪದರಿನ ಪಾವುಡದಿಂದ ಶೋಧಿಸಿದುದಕವನ್ನು ಆ ಜಂಗಮದ ಅಡಿಪಾದ ಮೂರುಮೂರುವೇಳೆ, ಪಂಚಪಂಚಾಂಗುಲಗಳೊಂದೊಂದುವೇಳೆ, ಮೂಲಪಂಚಾಕ್ಷರಧ್ಯಾನದಲ್ಲಿ ಮನಘನವಾಗಿ ಸ್ಪರ್ಶನಂಗೈದು, ದೀಕ್ಷಾಪಾದೋದಕವನ್ನು ಚರಲಿಂಗಕ್ಕೆ ಮುಖಮಜ್ಜನವ ಮಾಡಬೇಕು ಸ್ವಾಮಿಯೆಂದಲ್ಲಿ, ಹರಹರಾಯೆಂದು ಕೈಕೊಂಡು, ಲಿಂಗಾಭಿಷೇಕ ಮುಖಮಜ್ಜನವ ಮಾಡಿದ ಚರಲಿಂಗದ ಪಾದಕ್ಕೆ ಪಾವಗೊರಡ ಮೆಟ್ಟಿಸಿ, ಹಸ್ತವ ಹಿಡಿದು, ಬಹುಪರಾಕು ಎಚ್ಚರವೆಚ್ಚರ ಮಹಾಲಿಂಗದಲ್ಲಿ ಸ್ವಾಮಿಯೆಂದು ಸ್ತುತಿಸುತ್ತ ಗರ್ದುಗೆಯ ಮೇಲೆ ಮೂರ್ತಮಾಡಿದ ಬಳಿಕ ಉಭಯಪಾದಾಭಿಷೇಕಂಗೈದುದಕವ ಲಿಂಗಾಂಗಕ್ಕೆ ಸಂಪ್ರೋಕ್ಷಿಸಿದ ತದನಂತರದಲ್ಲಿ, ಮುಖಮಜ್ಜನಕ್ಕೆ ಮಾಡಿದಂಥ ಗುರುಪಾದೋದಕ ತಂಬಿಗೆಯನ್ನು ಭಾಂಡಕ್ಕೆ ಹಸ್ತಸ್ಪರ್ಶನ ಧಾರಣವಿದ್ದರೆ ಆ ಉದಕವ ಶೋಧಿಸಿದ ಭಾಂಡಂಗಳಿಗೆ ಸಮ್ಮಿಶ್ರವ ಮಾಡುವುದು. ಇಲ್ಲವಾದಡೆ ತಮ್ಮ ಅರ್ಚನ ಅರ್ಪಣಗಳಿಗೆ ಮಡುಗಿಕೊಂಡು, ದಿವರಾತ್ರಿಗಳೆನ್ನದೆ ಚರಲಿಂಗಪಾದೋದಕಪ್ರಾಣಿಗಳೆ ನಿರವಯಪ್ರಭು ಮಹಾಂತನ ಪ್ರತಿಬಿಂಬ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.