Index   ವಚನ - 12    Search  
 
ವೀರಶೈವಾಚಾರಗುರುಮಾರ್ಗವಿಡಿದು ಬಂದ ಭಕ್ತಗಣಾಧೀಶ್ವರರು ಕ್ರಿಯಾಜಂಗಮಲಿಂಗದ ಪಾದಪೂಜೆಯ ಮಾಡುವ ವಿವರವದೆಂತೆಂದೊಡೆ : ಜಂಗಮಲಿಂಗಮೂರ್ತಿಗಳು ತಮ್ಮ ಗೃಹಕ್ಕೆ ಬಂದು, ಶಿವಲಿಂಗಾರ್ಪಣಕ್ಕೆ ಭಿಕ್ಷಾಯೆಂದಾಕ್ಷಣವೆ, ಶರಣುಶರಣಾರ್ಥಿ, ಮಹಾಲಿಂಗಾರ್ಪಣಕ್ಕೆ ನಮಸ್ಕಾರವೆಂದು ಅಭಿವಂದಿಸಿ, ಆಸನವ ರಚಿಸಿದ ಮೇಲೆ ಮೂರ್ತಿಗೊಂಡ ತದನಂತರದೊಳು ಅವರ ಜಂಘೆಯಾಗೊಪ್ಪುವ ವೃತ್ತಸ್ಥಾನಪರಿಯಂತರವು, ಬಹುಗುಣದಲ್ಲಿ ತೊಳೆದಂಥ ನಿರ್ಮಾಲ್ಯವ ಧೂಳೋದಕದಿಂದ ಹೊಸದಾಗಿ ಕಟ್ಟಿದ ಆಲಯ ಬಾವಿ ಧನ ಧಾನ್ಯ ಕಾಯಿಪಲ್ಲೆ ಕಾಷ್ಠ ಮೊದಲಾದ ಜನನಿಜಠರದಿಂದುದಯವಾದ ಶಿಶುವಿಗೆ, ಲಿಂಗಾಂಗ ಮುಂತಾದ ಹೊಸ ಅರುವೆ ಆಭರಣ, ದಗ್ಧದ್ರವ್ಯ ಕಡೆಯಾದವಕ್ಕೆ ಸಂಪ್ರೋಕ್ಷಿಸಿ, ಪವಿತ್ರವೆನಿಸಿ, ಆಸೆ ಆಮಿಷ ರೋಷಾದಿಗಳಿಲ್ಲದಾಚರಿಸುವುದೆ ನಿರವಯಪ್ರಭು ಮಹಾಂತನಾಚಾರ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.