Index   ವಚನ - 15    Search  
 
ಪರಮಾನಂದಲಿಂಗಪಾದೋದಕವ ಭಸ್ಮಮಿಶ್ರಂಗೈದು, ಕಂಡಿತವ ಮಾಡಿ, ಇಪ್ಪತ್ತೊಂದುಪ್ರಣಮವ ಸಂಬಂಧಿಸಿ, ತನ್ನ ಚಿದ್ಬೆಳಗಿನ ಚಿತ್ಪ್ರಭೆಯೆಂದರ್ಚಿಸಿ, ಜಂಗಮಲಿಂಗವು ಇಷ್ಟಲಿಂಗಮಂತ್ರಸ್ನಾನಂಗೆಯ್ದು, ಪ್ರಾಣಲಿಂಗಮಂತ್ರಧೂಳನಮಂ ಮಾಡಿ, ಭಾವಲಿಂಗಮಂತ್ರದೊಡನೆ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣಂಗೈದು, ಮೇಲೆ ತಾನು ಶರಣುಹೊಕ್ಕು, ಆ ಜಂಗಮಲಿಂಗ ದೇವನೊಕ್ಕುಮಿಕ್ಕ ಮಹಾಶೇಷಭಸಿತಮಂ ಬೆಸಗೊಂಡು; ಆ ಹಿಂದೆ ಹೇಳಿದ ನಾದಬಿಂದುಕಳಾಪ್ರಣಮದೊಳ್ ಜಂಗಮಲಿಂಗದಂತೆ ಸ್ನಾನಂಗೈದು, ಚಿನ್ನಾದ ಚಿದ್ಬಿಂದು ಚಿತ್ಕಳಾಪ್ರಣಮದೊಳ್ ಧೂಳನಂ ಮಾಡಿ, ಪರನಾದಬಿಂದುಕಳಾಪ್ರಣಮದೊಳ್ ಧ್ಯಾನಾರೂಢನಾಗಿ, ತಾನನಾದಿಯಲ್ಲಿ ಧರಿಸಿಬಂದ ಮೂಲಪ್ರಣಮಲಿಂಗಾಂಗದ ಷಡುಸ್ಥಾನಗಳ ಘನಗುರುಮುಖದಿಂದರಿದು, ಅಷ್ಟವಿಧಸಕೀಲಂಗಳಿಂದ ಜಂಗಮಲಿಂಗದೇವನಂತೆ ಧಾರಣಂಗೈದು, ಚಿದ್ಬೆಳಗಿನೊಳಗೆ ಮಹಾಬೆಳಗಾಗಿರ್ಪವರೆ, ನಿರವಯಪ್ರಭು ಮಹಾಂತನ ಪ್ರತಿಬಿಂಬ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.