Index   ವಚನ - 16    Search  
 
ಆ ಹಿಂದೆ ಭಸಿತಕ್ಕೆಂದು ಮಾಡಿ, ಗಿಂಡಿಯಲ್ಲಿಟ್ಟಂಥ ಲಿಂಗಪಾದೋದಕಪ್ರಸನ್ನ ಪ್ರಸಾದಿಗಳು, ಲಿಂಗಾರ್ಪಿತವ ಮಾಡಲಾಗದೆಂದುದು ಗುರುವಚನ. ಅಲ್ಲಿಂದ ಜಂಗಮಲಿಂಗ ಭಕ್ತಗಣಗಳು ಹರಗುರುವಚನೋಕ್ತಿಯಿಂದ ರುದ್ರಾಕ್ಷಿಗಳ ಆದಿ ಅಂತ್ಯಮಂ ಸದ್ಗುರುವಿಂದರಿದು, ಸ್ಥಾನಸ್ಥಾನಂಗಳೊಳು ಮಂತ್ರಸ್ಮರಣೆಯಿಂದ ಧಾರಣಂಗೈದು, ತನ್ನ ಮೂಲ ಚಿತ್ತುವಿನ ಚಿದ್ಬೆಳಗೆ ತನಗಾಭರಣವಾಗಿರ್ಪುದೆಂದರಿದ ಶರಣನೆ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.