ಪರಮಾರಾಧ್ಯಜಂಗಮಾರಾಧನೆಯಂ ಮಾಡಿ,
ನಮಸ್ಕಾರವಾದ ಮೇಲೆ,
ಆ ಪ್ರಸಾದ ಗಂಧಾಕ್ಷತೆ ಪುಷ್ಪ ಪತ್ರಿಗಳ
ಲಿಂಗಜಂಗಮ ಜಂಗಮಲಿಂಗಶರಣರು
ಪರಿಣಾಮತೃಪ್ತರಾಗಿ ನಿರ್ಮಾಲ್ಯವ ಮಾಡಿ,
ನಿಕ್ಷೇಪದಿಂದ ಸಮಾಪ್ತವ ಮಾಡಬೇಕಲ್ಲದೆ,
ಉಳಿವಿ ಕಡೆಗಿಟ್ಟು, ತೀರ್ಥವ ಸಲಿಸಿ,
ಪ್ರಸಾದ ಮುಗಿವ ಮಧ್ಯದಲ್ಲಿ ಲಿಂಗಾರ್ಚನೆಗಳ ಮಾಡಲಾಗದು,
ಅಥವಾ ತನಗೆ ಅಷ್ಟವಿಧಾರ್ಚನೆ
ಷೋಡಶೋಪಚಾರದ ಭ್ರಾಂತುವಿದ್ದರೆ,
ತೀರ್ಥವ ಪಡೆದುಕೊಂಡ ಸ್ಥಳವ ಬಿಟ್ಟು,
ಏಕಾಂತಸ್ಥಳದಲ್ಲಿ ತಮ್ಮ ಸ್ಥಳವಿದ್ದಂತೆ ಆಚರಿಸುವುದು.
ಆ ಭ್ರಾಂತಿಗಳೆಲ್ಲ ಲಿಂಗಜಂಗಮ ಜಂಗಮಲಿಂಗಶರಣರು
ಪ್ರಸಾದ ಪಾದೋದಕದಲ್ಲಿ ಉಪಚಾರಗಳನಳಿದುಳಿದು,
ನಿಭ್ರಾಂತಗಳಾದೀಶ್ವರರು ಚಮತ್ಕಾರವಾಗಿ,
ಜಂಗಮಪಾದಸ್ಪರ್ಶನದಿಂದುದಯವಾದ
ದೀಕ್ಷಾಪಾದೋದಕದಿಂದ ಲಿಂಗಾಂಗಸ್ನಾನಂಗೈದು,
ಚುಳುಕುಮಾತ್ರವಾಗಿ,
ಪಾದೋದಕ ಭಸ್ಮೋದಕ ಶುದ್ಧೋದಕದಿಂದ
ಲಿಂಗಮಜ್ಜನವ ಮಾಡಿ,
ಆ ಪ್ರಸಾದಪುಷ್ಪವ ಸ್ವಲ್ಪಮಾತ್ರವ ಧರಿಸಿ,
ಒಂದು ವೇಳೆ ಹಸ್ತಜಪಮಂ ಮಣಿಗಳ ದ್ವಾದಶವನ್ನು ಪ್ರದಕ್ಷಿಸಿ,
ನವಲಿಂಗಮೂರ್ತಿಗಳ ಧ್ಯಾನದಿಂದ
ಘನಪಾದತೀರ್ಥಪ್ರಸಾದವ ಮುಗಿದು,
ಪ್ರಸನ್ನಪ್ರಸಾದದಲ್ಲಿ ನಿಜಲೋಲುಪ್ತರಾದವರೆ
ನಿರವಯಪ್ರಭು ಮಹಾಂತಗಣವೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Paramārādhyajaṅgamārādhaneyaṁ māḍi,
namaskāravāda mēle,
ā prasāda gandhākṣate puṣpa patrigaḷa
liṅgajaṅgama jaṅgamaliṅgaśaraṇaru
pariṇāmatr̥ptarāgi nirmālyava māḍi,
nikṣēpadinda samāptava māḍabēkallade,
uḷivi kaḍegiṭṭu, tīrthava salisi,
prasāda mugiva madhyadalli liṅgārcanegaḷa māḍalāgadu,
athavā tanage aṣṭavidhārcane
ṣōḍaśōpacārada bhrāntuviddare,Tīrthava paḍedukoṇḍa sthaḷava biṭṭu,
ēkāntasthaḷadalli tam'ma sthaḷaviddante ācarisuvudu.
Ā bhrāntigaḷella liṅgajaṅgama jaṅgamaliṅgaśaraṇaru
prasāda pādōdakadalli upacāragaḷanaḷiduḷidu,
nibhrāntagaḷādīśvararu camatkāravāgi,
jaṅgamapādasparśanadindudayavāda
dīkṣāpādōdakadinda liṅgāṅgasnānaṅgaidu,
cuḷukumātravāgi,
pādōdaka bhasmōdaka śud'dhōdakadinda
liṅgamajjanava māḍi,
Ā prasādapuṣpava svalpamātrava dharisi,
ondu vēḷe hastajapamaṁ maṇigaḷa dvādaśavannu pradakṣisi,
navaliṅgamūrtigaḷa dhyānadinda
ghanapādatīrthaprasādava mugidu,
prasannaprasādadalli nijalōluptarādavare
niravayaprabhu mahāntagaṇavembe kāṇā
sid'dhamallikārjunaliṅgēśvara.