ಜೀವಕ್ಕೆ ಸಂಜೀವನವಾದ ಭಾವಸೂತಕವದೆಂತೆಂದೊಡೆ:
ಶ್ರೀಗುರು ನಿರವಯ ಪರಿಪೂರ್ಣಬ್ರಹ್ಮ
ಸಚ್ಚಿದಾನಂದ ಕರುಣಕಟಾಕ್ಷೆಯಿಂದೆ
ಮಾರ್ಗಕ್ರಿಯಾಚರಣೆಯ ಮೀರಿದ ಕ್ರಿಯಾಚರಣೆ
ಷಟ್ಸ್ಥಲಾನುಭಾವದಾರ್ಚನೆ ಅರ್ಪಣಗಳಿಂದ ಕೂಡಿ
ಒಂದೊಡಲಾಗಿ ಎರಡಳಿದು,
ತಾನೆ ಗುರುಸ್ವರೂಪ, ತಾನೆ ಲಿಂಗಸ್ವರೂಪ,
ತಾನೆ ಜಂಗಮಸ್ವರೂಪ, ತಾನೆ ಪಾದೋದಕಪ್ರಸಾದ,
ತನ್ನ ಚಿತ್ಪ್ರಭೆಗಳ ಚಿದ್ವಿಭೂತಿ ರುದ್ರಾಕ್ಷಿ ಮಂತ್ರ,
ತಾನೆ ಅನಾದಿ ಪರವಸ್ತುವಾದುದರಿಂದ
ಆ ಪರಮಗುರು ಬಂದು ತನುವಿನ ಕೊನೆಯೊಳಗೆ
ಮಹದರುವಾಗಿ ನೆಲೆಗೊಂಡಿರ್ಪನು.
ಪರಿಪೂರ್ಣಲಿಂಗ ಬಂದು ಸರ್ವೇಂದ್ರಿಗಳಲ್ಲಿ
ತುಂಬಿತುಳುಕಾಡುತಿರ್ಪನು.
ಪರಮಾನುಭಾವಜಂಗಮ ಬಂದು ಸತ್ಕರಣಂಗಳಲ್ಲಿ
ಬೆಳಗ ಬೀರುತಿರ್ಪನು.
ಚಿತ್ಪಾದೋದಕಪ್ರಸಾದವ ಜ್ಯೋತಿರ್ಮಯ ಕಳೆಗಲ
ಸರ್ವಾಂಗದಿ ತುಂಬಿ ಬಿಂಬಿಸುತಿರ್ಪವುಯೆಂಬ
ಬೆಳಗ ಕಂಡ ಮೇಲೆ
ಅಸತ್ಯ ಅನಾಚಾರ ಅಜ್ಞಾನ ಕ್ರಿಯಾಚಾರ
ಭ್ರಷ್ಟರ ಸಂಗವೆ ಭಯಭಂಗವೆಂಬ
ಹರಗುರು ನಿರೂಪಣವ ಕಂಡು
ಬಿಡಲಾರದೆ ಅವರೊಡವೆರದು,
ಸಮರಸಕ್ರಿಯೆಗಳ ಬಳಸಿ,
ಬಯಲಬ್ರಹ್ಮವಾಗಬೇಕೆಂದು ಭ್ರಾಂತುಭ್ರಮೆಗೊಂಡು,
ಬಯಸಿ ಬಡವಾಗಿರ್ಪುದೆ
ಪಂಚಮದಲ್ಲಿ ಜೀವನೊಳಗಣ
ಅಂತರಂಗದ ಭಾವಸೂತಕ ಕಾಣಾ
ನಿರವಯಪ್ರಭುಮಹಾಂತ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Jīvakke san̄jīvanavāda bhāvasūtakavadentendoḍe:
Śrīguru niravaya paripūrṇabrahma
saccidānanda karuṇakaṭākṣeyinde
mārgakriyācaraṇeya mīrida kriyācaraṇe
ṣaṭsthalānubhāvadārcane arpaṇagaḷinda kūḍi
ondoḍalāgi eraḍaḷidu,
tāne gurusvarūpa, tāne liṅgasvarūpa,
tāne jaṅgamasvarūpa, tāne pādōdakaprasāda,
tanna citprabhegaḷa cidvibhūti rudrākṣi mantra,
tāne anādi paravastuvādudarinda
ā paramaguru bandu tanuvina koneyoḷage
Mahadaruvāgi nelegoṇḍirpanu.
Paripūrṇaliṅga bandu sarvēndrigaḷalli
tumbituḷukāḍutirpanu.
Paramānubhāvajaṅgama bandu satkaraṇaṅgaḷalli
beḷaga bīrutirpanu.
Citpādōdakaprasādava jyōtirmaya kaḷegala
sarvāṅgadi tumbi bimbisutirpavuyemba
beḷaga kaṇḍa mēle
asatya anācāra ajñāna kriyācāra
bhraṣṭara saṅgave bhayabhaṅgavemba
haraguru nirūpaṇava kaṇḍu
Biḍalārade avaroḍaveradu,
samarasakriyegaḷa baḷasi,
bayalabrahmavāgabēkendu bhrāntubhramegoṇḍu,
bayasi baḍavāgirpude
pan̄camadalli jīvanoḷagaṇa
antaraṅgada bhāvasūtaka kāṇā
niravayaprabhumahānta
sid'dhamallikārjunaliṅgēśvara.