Index   ವಚನ - 1    Search  
 
ಪ್ರತಿಯಿಲ್ಲದ ದೇವನ, ನಿಗಮಾಗಮಂಗಳಿಗೆ ನಿಲುಕದೆ ದೂರದಲ್ಲಿಹನ, ಹರಿಯಜ ಬ್ರಹ್ಮ ರುದ್ರ ವಾದ ತರ್ಕಕ್ಕೆ ನಿಲುಕದೆ ಮಾಯೆಗೆ ಸಿಕ್ಕದಾತನ, ಬ್ರಹ್ಮ ವಿಷ್ಣು ರುದ್ರರ ನಿರ್ಮಿತವ ಮಾಡಿ, ಇರುವೆಯು ಮೊದಲು ಆನೆಯು ಕಡೆ ಜೀವರಾಸಿಯೆಲ್ಲರಿಗೆ ಅಂತು ಎಂಬತ್ತು ನಾಲ್ಕು ಕೋಟೆಗೆಲ್ಲಕ್ಕೆ ಅಧಿಪತಿಯ ಮಾಡಿ ನಿಜಹೃದಯದಲ್ಲಿರಿಸಿ, ಮಾಯಚಿನ್ಮಯವಾಗಿ ಇದ್ದಾತನಂ ಲೀಲೆ ಬಾಲತ್ವದಿಂದ ಈ ಕೃತಿಯ ಪೇಳ್ವೆನು [ಇಷ್ಟಲಿಂಗೇಶ್ವರಾ].