ಮೂರ್ಖಂಗೆ ಕಥಾಪ್ರಸಂಗವನು
ಬೋಧಿಸಿದ ಪರಿಯ ಮಾಡುವರೆ ಏನಯ್ಯ?
ಸಂಭ್ರಮದೋಲಗದಲ್ಲಿ ನಂಬಿಗೆಯಂ ಕೊಟ್ಟು
ರಂಬಿಸಿಯೆನ್ನನು ಕುಂಭಿನಿಗೆ ಕಳುಹಿ
ಶಂಭುಶಂಕರ ಸದಾಶಿವ ಮುಂಬರವ
ಬಾರದ ಹಲವು ಯೋಚನದ
ಹಗರಣವ ಮಾಡದ ಹೊಲಬ ಮರೆಯಿಸದ
ಸಮರಸವ ಮರಸುವ
[ಹ]ಲ ಬಗೆಯ ನೆಲೆಯನರುಹುವ ನೀನೆ
ನಿಜವನರುಹುವ ದೇವ ಕಾಣಾ ಇಷ್ಟಲಿಂಗೇಶ್ವರಾ.
Art
Manuscript
Music
Courtesy:
Transliteration
Mūrkhaṅge kathāprasaṅgavanu
bōdhisida pariya māḍuvare ēnayya?
Sambhramadōlagadalli nambigeyaṁ koṭṭu
rambisiyennanu kumbhinige kaḷuhi
śambhuśaṅkara sadāśiva mumbarava
bārada halavu yōcanada
hagaraṇava māḍada holaba mareyisada
samarasava marasuva
[ha]la bageya neleyanaruhuva nīne
nijavanaruhuva dēva kāṇā iṣṭaliṅgēśvarā.