•  
  •  
  •  
  •  
Index   ವಚನ - 1113    Search  
 
ಕಿಚ್ಚು ಬಯಲೆಂದಡದು ನಿರವಯವಕೆ ಹತ್ತಿ ಹೊತ್ತಿದುದುಂಟೆ? ಅರಿವು ನಿಜವೆಂದಡೆ ಅಡಗುವುದಕ್ಕೊಂದು ನಾಮ ಉಂಟು. ಅಗ್ನಿರೂಪಿನಲ್ಲಿ ಹುಟ್ಟಿ ಆ ರೂಪ ದಗ್ಧವ ಮಾಡಿದಲ್ಲದೆ ತನ್ನ ಹೊದ್ದಿಗೆ ಕೆಡದು. ಆ ಉಭಯವನರಿವನ್ನಬರ ಕೈಯ ಕುರುಹು, ಅರಿವನ ಜ್ಞಾನ ಪರಿಪೂರ್ಣವಾಗಿರಬೇಕು. ನಮ್ಮ ಗುಹೇಶ್ವರಲಿಂಗದಲ್ಲಿ ಆ ಉಭಯವ ತಿಳಿವನ್ನಬರ ತನ್ನ ಹಿಂಗಿರಬೇಕು ಕಾಣಾ, ಎಲೆ ಅಂಬಿಗರ ಚೌಡಯ್ಯ.
Transliteration Kiccu bayalendaḍadu niravayavake hatti hottiduduṇṭe? Arivu nijavendaḍe aḍaguvudakkondu nāma uṇṭu. Agnirūpinalli huṭṭi ā rūpa dagdhava māḍidallade tanna hoddige keḍadu. Ā ubhayavanarivannabara kaiya kuruhu, arivana jñāna paripūrṇavāgirabēku. Nam'ma guhēśvaraliṅgadalli ā ubhayava tiḷivannabara tanna hiṅgirabēku kāṇā, ele ambigara cauḍayya.
Hindi Translation आग शून्य कहें तो वह निरवय में लगे जल सकता ? ज्ञान सच कहें तो छिपने को एक नाम है। अग्नि रूप में पैदे वह रूप जलने के बिना अपने समीप में न बुझता। उन उभयों को जानने तक हाथ का चिह्न, समझने का ज्ञान परिपूर्ण होना चाहिए। हमारे गुहेश्वर लिंग में उन उभयों को समझने तक अपनापन मिठना चाहिए, देख रे अंबिगर चौडय्या । Translated by: Eswara Sharma M and Govindarao B N