Index   ವಚನ - 12    Search  
 
ಕಂಡುದ ಸ್ಥಿರವೆಂಬೋರಲ್ಲದೆ ಕಾಣದ ಸಾಧ್ಯವಾಗಲಾಗದೆಂಬೋರು. ಮುಗ್ಧ ಶರಣೆಯು ಎಲೆಯಡಗಿದ ವೃಕ್ಷದಂತೆ ನೆಲದೊಳಗಣ ಜಲದ ತಣುವಿನಂತೆ ನೆಲದೊಳಗಣ ನಿಧಾನವಿದ್ದು ಕಾಣದೆ ಹಂಬಲಿಪಂತೆ. ತಾನು ಶುಕ್ರನ ಕೊಟ್ಟು ಜನದೊಳು ನಿಂದು ಮುಳುಗಿ ಗಡ ಮುರಿದು ವರುಷವಾಯವಾಗಿ(?) ಹಂಬಲ ಮರದು ಶಿವನ ಧ್ಯಾನಾರೂಢಳಾಗಿ ಲೋಲುಪ್ತಿಯಿಂದ ಇರುವ ಶರಣೆಗೆ ಪೂರ್ವ ನಿಜವ ಸಂತಾನವ ತೋರಿ ನಿಧಿನಿಧಾನದಲ್ಲಿರಿಸಿದೆ ನೀನೆ ಕಾಣಾ ಕರಸ್ಥಳದಿಷ್ಟಲಿಂಗೇಶ್ವರಾ.