Index   ವಚನ - 11    Search  
 
ದೇವಿಯರೊಳಗೆ ದೇವನೆ ಕೂಡಿದ. ಹರಹರ ಮಾಯೆ[ಯ] ಘನವ ಮನವ ತನುವನಾರಿಗೆಯು ತಿಳಿಯಬಾರದು. ತಿಳಿದೆನೆಂಬೊ ಭ್ರಮಿ[ತರಿಗೆ] ಕರ ಸನ್ನಿಹಿತವಳವಡುವಳಲ್ಲ. ತಂದೆ ಅಣ್ಣ ತಮ್ಮ ಬಂಧು ಬಳಗ ಕುಲ ಆವುದೆನ್ನದೆ ಕುಲಗೆಡುವಂಥವಳಲ್ಲ. ನಮ್ಮ ಘನ ಗುರು ಅಲ್ಲಮಪ್ರಭುದೇವನು ಶಾಂತಿ ಸೈರಣೆ ಉಳ್ಳಂಥವಂಗೆ ತದ್ರೂಪದ ಮಹಿಮೆಯ ಉಸುರಿ ಹೇಳುವನು ನಮ್ಮ ತನಯ ಶಿವಶಾಂತ ಮೂರುತಿ ಕಾಣಾ ಚೆನ್ನಬಸವೇಶ್ವರಾ.