Index   ವಚನ - 15    Search  
 
ಆವಾವ ಸ್ಥಾನದಲ್ಲಿಯು ಉಗ್ರಮೂರ್ತಿ ನಯನ ಕರುಣದಿಂದ ಶಿವಲೀಲಾನಂದವಾಗಿ ಇರುವ ಶರಣರು ಲೌಕಿಕದ ಜಡರು ಮಂಕು ಮರುಳರು ಕಳ್ಳರು ಸುಳ್ಳರು ಆಹಾರಗಳ್ಳರು ಇತ್ಯಾದಿಕರು ಅರಿಯಬಲ್ಲರೆ? ಅಂತಪ್ಪ ಮಹಿಮರ ಶಿವಲಿಂಗನಿಷ್ಠಾಪರರ ಏಕದಾರ್ಚನೆಯರ ಮಹಿಮೆಯ ನೋಡಲ್ಕೆ ಯರಳು ಇದ್ದಲ್ಲಿಗೆ ಸಕ್ಕರೆಯು ಬಂದ ಪರಿಯಾಯಿತ್ತು ಕಾಣಾ ಕುವರ ಚೆನ್ನಬಸವೇಶ್ವರಾ.