Index   ವಚನ - 17    Search  
 
ಎಲೆ ಅಯ್ಯಾ, ನೀನು ಕುಲವು, ಅವಕುಲವು ಎನ್ನದೆ ಒಲಿದು ಅವರಿಗೆ ಬೆಲೆಯಿಲ್ಲದೆ ಬಲವ ಮಾಡಿದೆ. ಒಲಿದು ನಿನ್ನ ಪೂಜಿಪರಿಗೆ ಗೆಲವ ಮಾಡಿ, ನಿಲುಗಡೆಯ ಮರೆದವರ ತಲೆಯರಿದು ಬಿಸುಡಿ[ದೆ] ಕಲಿದೇವ, ನಿನಗಾರು ಸರಿಯಿಲ್ಲ ಕಾಣಾ ಚೆನ್ನಬಸವೇಶ್ವರಾ.