Index   ವಚನ - 18    Search  
 
ಎಲೆ ಅಯ್ಯಾ, ನಿನ್ನ ಆಸೆ ಬವುಸೆ ತೀರಿಸಿಕೊಂಡು ಧ್ಯಾನ ಮುಗಿಸಿ ಜವಳವರಿದು ಪವನವೇಗದಿ ಬಂದು ಗಿರಿಜೆಗೆ ಅರುಹಿ ಮಂದಗರ್ವದ ರಾಕ್ಷಸರನು ಸಂಹರಿಸುವೆನೆಂದು ಬಸವಗಣನಜ ಹರಿ ಬ್ರಹ್ಮ ದೇವೇಂದ್ರ ಯಮ ದಿಕ್ಪಾಲ ನವಗ್ರಹ-ರವಿ ಕೇತು ಕಾಲ ರಾಹು ಮರುಳಭೂತವು ಹ್ರೀಂಕಾರಿ ಪ್ರೇತಸ್ವಿನಿ ಚಾಮುಂಡಿ ನಿಗಂಡಿ ಇಂತಪ್ಪವಿವೇಕವಾದ ಚಂದ್ರ ಸೂರ್ಯ ವಾಯು ಮೊದಲಾದ ಸಂಕುಳ ಸಹ ಕೂಡಿ ಬಲವ ನಿಂದು ನಿಲುಕಡೆ ಕಂಡ ನಮ್ಮ ಘನಗುರು ಸದಾಶಿವನು ಕಾಣಾ ಕುವರ ಚೆನ್ನಬಸವೇಶ್ವರಾ.