Index   ವಚನ - 2    Search  
 
ಎನ್ನ ತನು ಬಸವಣ್ಣನಲ್ಲಿ ಅಡಗಿತ್ತು. ಎನ್ನ ಮನ ಚೆನ್ನಬಸವಣ್ಣನಲ್ಲಿ ಅಡಗಿತ್ತು. ಎನ್ನ ಪ್ರಾಣ ಪ್ರಭುದೇವರಲ್ಲಿ ಅಡಗಿತ್ತು. ಎನ್ನ ಸರ್ವಾಂಗದ ಸಕಲಕರಣಂಗಳೆಲ್ಲವು ನಿಮ್ಮ ಶರಣರ ಶ್ರೀಪಾದದಲ್ಲಿ ಅಡಗಿದವು ಮಹಾಘನ ಶಾಂತಮಲ್ಲಿಕಾರ್ಜುನಾ.