Index   ವಚನ - 3    Search  
 
ಚೊಕ್ಕ ಭೋಜನಕಂಪಿತವಾದ ತಂದೆಯನು, ತನ್ನ ಸಾಗಿಸಿ ಸಾಕಿದವ್ವೆಯನು, ತನ್ನಲ್ಲಿ ಮೆಚ್ಚಿಯಚ್ಚೊತ್ತಿಹ ಬೆಚ್ಚಳನು, ಇಚ್ಛೆಗಿಚ್ಛೆಯ ಬಿಟ್ಟು ಪರಜಂಗಮವಾಗಿ ನಿಂದ ಬಳಿಕ ಆ ಚೊಕ್ಕಭೋಜನ ತನಗಿಲ್ಲದಿರಬೇಕು ಆ ತಂದೆಗೆ ತಪ್ಪಿರಬೇಕು, ಆ ತಾಯಿಗೆ ಸಂದಿಸದಿರಬೇಕು ಹೆಂಡತಿಗೆ ಮನವಿಕ್ಕದಿರಬೇಕು. ಇಂತಾದಾತನೆ ಪರಮಪ್ರಭು ಶಾಂತಮಲ್ಲಿಕಾರ್ಜುನದೇವರು ತಾನೇ ಕಾಣಾ ಲಜ್ಚೆಗೆಟ್ಟ ನಿರ್ಲಜ್ಜನಾದ ಶರಣ.